ಸ್ವಿಚ್ { ಕೇಸ್ N ಸಿನಿಮಾವನ್ನು ಚೇತನ್ ಸಂಜೀವ ಶೆಟ್ಟಿ ನಿರ್ದೇಶನ ಮಾಡಿದ್ದಾರೆ. ಚಿತ್ರದಲ್ಲಿ ವಿಜಯ್ ಸೂರ್ಯ ನಾಯಕನಾಗಿ ಹಾಗೂ ಶ್ವೇತಾ ವಿಜಯ್‌ಕುಮಾರ್ ನಾಯಕಿಯಾಗಿ ನಟಿಸಿದ್ದಾರೆ. ಉಳಿದಂತೆ ಪೃಥ್ವಿ ರಾಜ್, ಕಾರ್ತಿಕ್ ವೈಭವ್, ಸಂತೋಷ್ ಕರ್ಕಿ, ಬಾಲಾ ರಾಜ್ವಾಡಿ ಮುಂತಾದವರು ತಾರಾಗಣದಲ್ಲಿದ್ದಾರೆ.
ಈ ಸಿನಿಮಾಗೆ ಬ್ರುಥುವ ಕ್ಯಾಲೆಬ್ ಸಂಗೀತ ಹಾಗೂ ಪ್ರಶಾಂತ್ ಗಿರಿಯಪ್ಪ ಛಾಯಾಗ್ರಹಣವಿದೆ. ಕೊಂಡಾಣ ಫಿಲ್ಮ್ಸ್ ಬ್ಯಾನರ್ ಅಡಿಯಲ್ಲಿ ಈ ಸಿನಿಮಾ ತಯಾರಾಗಿದೆ. ಪ್ರತಿದಿನ ಐಟಿ ವೃತ್ತಿಪರರು ಎದುರಿಸುವ ಸವಾಲುಗಳನ್ನು ಈ ಸಿನಿಮಾದಲ್ಲಿ ಹೇಳಾಗಿದೆ.